Thursday, June 23, 2011

ಹುಡುಗ: ಬಾಳ ಪಯಣದಲ್ಲಿ ಎಲ್ಲ ಜೀವವು ಹಾತೊರೆಯುವುದು ಪ್ರೀತಿಗಾಗಿ

ಹುಡುಗ:
ಬಾಳ ಪಯಣದಲ್ಲಿ ಎಲ್ಲ ಜೀವವು ಹಾತೊರೆಯುವುದು ಪ್ರೀತಿಗಾಗಿ. ಅದೆಲ್ಲಿಯ ಮಾಯೆಯೋ ನಿನ್ನ ಪ್ರೀತಿಸಿಬಿಟ್ಟೆ.ಅದೊಂದು ಹುಚ್ಚು ಪ್ರೀತಿ ಬಿಡು.ನಿನ್ನ ಪ್ರೀತಿಸಿದೆ,ಕನಸುಗಳ ಗೂಡು ಕಟ್ಟಿದೆ. ನನಗೆಲ್ಲಿ ಗೊತ್ತಿತ್ತು ನಾ ಕಟ್ಟಿದ್ದು ಸಮುದ್ರದ ಅಂಚಿನ ಮರಳ ಗುಬ್ಬಚ್ಚಿ ಗೂಡೆಂದು? ಕಾಲನ ಅಲೆಗೆ ಸಿಕ್ಕಿ ನುಚ್ಚು ನೂರಾಗುವುದೆಂದು? ಬದುಕು ನಾವಂದುಕೊಂಡಂತೆ ಎಲ್ಲಿರುತ್ತದೆ ಹೇಳು ? ನೀನು ನನ್ನ ಬದುಕಿನಿಂದ ಎದ್ದು ಹೋದೆ. ನಾನು ಕಣ್ಣೀರು ಬತ್ತುವಷ್ಟು ಅತ್ತಿದ್ದೆ. ತಿಂಗಳುಗಳವರೆಗೆ ದಿನವೂ ಕುಡಿದಿದ್ದೆ.

ಯಾವುದಕ್ಕೂ ಬೇಸರವಿಲ್ಲ ಬಿಡು. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡವನು ನಾನು. ಅಥವಾ ಬದುಕು ಹಾಗೆ ಅಂದುಕೊಳ್ಳುವಂತೆ ಮಾಡಿದೆ.

ನಿನ್ನ ಪ್ರೀತಿಸಿದೆ, ಕನಸ ಕಟ್ಟಿದೆ, ಅದು ಚೂರಾದಾಗ ಕುಡಿದೆ, ಅಲೆದೆ, ಬಸವಳಿದೆ. ಆದರೆ ಕಾಲಕ್ಕೆ ಎಲ್ಲ ಮರೆಸುವ ಹಕ್ಕು,ತಾಕತ್ತು ಎರಡೂ ಇದೆಯಂತೆ. ಹೌದು ನಿನ್ನ ನೆನಪು ಆಗುವುದೇ ಇಲ್ಲ ಎಂದರೂ ತಪ್ಪಲ್ಲ. ಹಿಂದೆ ನಡೆದಿದ್ದೆಲ್ಲವ ನೆನೆದು ನಕ್ಕು ಬಿಟ್ಟಿದ್ದೇನೆ. ಎಲ್ಲೋ ಒಮ್ಮೊಮ್ಮೆ ನನಗೆ ನಾನೇ ಹುಚ್ಚ ಎನಿಸಿದ್ದೂ ಇದೆ. ನನ್ನ ತಪ್ಪಲ್ಲ ವಯಸ್ಸಿನದು ಎಂದು ನನಗೆ ನಾನೇ ಸಮಾಧನಿಸಿಕೊಂಡಿದ್ದೇನೆ.

ಹೌದು ನನ್ನ ಬದುಕಲ್ಲಿ ಹೊಸ ಹುಡುಗಿಯ ಪ್ರವೇಶವಾಗಿದೆ. ಬದುಕು ಬದಲಾಗಿದೆ. ಹುಡುಗತನ ಸುಮಾರಾಗಿ ಕಳೆದು ಹೊಸ ವಸಂತ ಬಂದಿದೆ. ತನ್ನ ಚಿಗುರು ಕಣ್ಣಿನಲ್ಲಿ ನಗುವ. ಮಾತಿನ ಮಲ್ಲಿಗೆ ಶರಣಾಗಿದ್ದೇನೆ. ನನ್ನ ಬದುಕಲ್ಲಿ. ಹೊಸ ಕಿರಣ,ಚೇತನ ಹೊತ್ತು ತಂದ ಕೀರ್ತಿ ಅವಳಿಗೆ. ನಿನ್ನೆ ಉದ್ದದ ಜಡೆಯನ್ನು ಪ್ರೀತಿಸುತ್ತಿದ್ದೆನಲ್ಲ. ನನ್ನ ಜೀವನದ ಹೊಸ ಚಿಲುಮೆ ತುಂಡು ಕೂದಲಿನ ಹುಡುಗಾಟದ ಹುಡುಗಿ ! ಅದೇ ತುಂಡು ಕೂಡಲೇ ಈಗ ಇಷ್ಟವಾಗಿಬಿಟ್ಟಿದೆ.

Thursday, October 1, 2009

ಪ್ರೀತಿಯ ಕನ್ನಡ ಪ್ರಿಯತಮೆಯ ಕನ್ನಡ
ಪ್ರಿಯತಮೆಯ ಪತ್ರವಿದು ಕನ್ನಡ
ಪ್ರಿಯತಮನ ಪ್ರತಮ ಚುಂಬನವಿದು  ಕನ್ನಡ //
ಸುಂದರ ಕಷ್ಟ
ಓದಲು ಇಷ್ಟ
ಬರೆಯಲು ಸ್ಪಷ್ಟ
ಮರೆತರೆ ನಷ್ಟ
ಪ್ರೀತಿಯ ಕನ್ನಡಿಗರಿಗೆ  ಕನ್ನಡಿಗನ ಸಾಮ್ರಾಜ್ಯಕ್ಕೆ  ಇದು ಮೊದಲ ಕರೆಯೋಲೆ.....